Versuchen GOLD - Frei
Kadamba Magazine - ಕದಂಬ ಸಂಚಿಕೆ-೧
Kadamba Magazine Description:
ಕದಂಬ ಒಂದು ಮಾಗಜಿನ್ ಅಲ್ಲ; ಅದು ಭಾವನೆಗಳ ಮಾತು, ಚಿಂತನೆಗಳ ಧ್ವನಿ ಮತ್ತು ಸೃಜನಶೀಲತೆಯ ಹಾದಿ. 2023ರ ಮಾರ್ಚ್ 30ರಂದು ಹುಟ್ಟಿಕೊಂಡ ಕದಂಬ, ಯುವ ಮನಸ್ಸುಗಳ ಕನಸುಗಳಿಗೆ ವೇದಿಕೆ ನೀಡಿ, ಸಾಹಿತ್ಯ, ಪತ್ರಿಕೋದ್ಯಮ, ಸಂಸ್ಕೃತಿ, ಸಮಾಜ ಮತ್ತು ಸಮಕಾಲೀನ ಚಿಂತನೆಗಳನ್ನು ಒಟ್ಟುಗೂಡಿಸುತ್ತಾ ನಿರಂತರವಾಗಿ ಬೆಳೆಯುತ್ತಿದೆ.
ಡಿಜಿಟಲ್ ಮತ್ತು ಮುದ್ರಿತ ಮಾಧ್ಯಮ ಎರಡರಲ್ಲೂ ಯಶಸ್ವಿಯಾಗಿ ಸಾಗುತ್ತಿರುವ ಕದಂಬ, ಹೊಸ ಬರಹಗಾರರು, ಕವಿಗಳು, ಕಥೆಗಾರರು ಮತ್ತು ಚಿಂತಕರು ತಮ್ಮ ಧ್ವನಿಯನ್ನು ಲೋಕಕ್ಕೆ ತಲುಪಿಸಲು ಅವಕಾಶ ಕಲ್ಪಿಸುತ್ತದೆ. ಇಲ್ಲಿ ಪ್ರತಿಯೊಂದು ಲೇಖನವೂ ಅನುಭವದಿಂದ ಹುಟ್ಟಿದ ಮಾತು; ಪ್ರತಿಯೊಂದು ಪುಟವೂ ಓದುಗರನ್ನು ಯೋಚನೆಗೆ ತಳ್ಳುವ ಪ್ರಯತ್ನ.
ಕದಂಬ – ನಿಮ್ಮ ಮಾತಿಗೆ, ನಿಮ್ಮ ಕನಸಿಗೆ, ನಿಮ್ಮ ಚಿಂತನೆಗೆ ವೇದಿಕೆ.
In dieser Ausgabe
ಮಾರ್ಚ್ 31ರಂದು ‘ಕದಂಬ’ ಮಾಸಪತ್ರಿಕೆ ತನ್ನ ಯಶಸ್ವಿ ಪ್ರಯಾಣದ ಎರಡು ವರ್ಷಗಳನ್ನು ಪೂರೈಸಿದೆ.
ಈ ಹಾದಿಯಲ್ಲಿ ನಮಗೆ ಸದಾ ಬೆಂಬಲ ನೀಡಿದ ಓದುಗರಿಗೆ, ಬರಹಗಾರರಿಗೆ ಹಾಗೂ ಜಾಹಿರಾತುದಾರರಿಗೆ ನಾವು ಮನಃಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ಕೇವಲ ಮುದ್ರಣ ಮಾಧ್ಯಮದಲ್ಲಿ ಆರಂಭವಾದ ‘ಕದಂಬ’, ಕಳೆದ ಜುಲೈ ತಿಂಗಳಿಂದ ವೆಬ್‌ಸೈಟ್‌ನಲ್ಲೂ ಲಭ್ಯವಿದ್ದು, ಇದೀಗ ಡಿಜಿಟಲ್ ಆವೃತ್ತಿಯನ್ನೂ ಪ್ರಾರಂಭಿಸುತ್ತಿದ್ದೇವೆ. ಇದರಿಂದ ಓದುಗರ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗುತ್ತದೆ ಎಂಬ ನಂಬಿಕೆಯಿದೆ.
ಇದುವರೆಗೆ ನೀವು ನಮಗೆ ನೀಡಿದ ಪ್ರೀತಿ, ಸಲಹೆ ಮತ್ತು ಸಹಕಾರ ಸದಾನಮ್ಮೊಂದಿಗೆ ಇರುತ್ತದೆ ಎದು ನಂಬಿದ್ದೇವೆ.
-ಗ್ಲೇನ್ ಗುಂಪಲಾಜೆ
ಸಂಪಾದಕ
ಕದಂಬ ಪತ್ರಿಕೆ